thili saaru recipe/how to make bele rasam|ತಿಳಿ ಸಾರು ರೆಸಿಪಿ |ಟೆಂಪಲ್ ಸ್ಟೈಲ್ ರಸಂ|mangalore style instant rasam|

ನಿಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ಸಾಮಾಗ್ರಿಯಲ್ಲಿ  ಸರಳ ಮತ್ತು ಸುಲಭ ರೀತಿಯಲ್ಲಿ  thilisaaru(ತಿಳಿ ಸಾರು) ಪಾಕವಿಧಾನ ಇದು ನಿಜವಾಗಿಯೂ ಬಿಸಿ ಬಿಸಿ ಅನ್ನದ ಜೊತೆಗೆ ರುಚಿಯಾಗಿರುತ್ತದೆ.

How to make instant rasam |ತಿಳಿ ಸಾರು ರೆಸಿಪಿ ಇನ್ ಕನ್ನಡ | karnataka style thili saaru recipe|

  • ಅಡುಗೆ ಮನೆಯಲ್ಲಿ ಲಭ್ಯವಿರುವ ಮಸಾಲೆಗಳನ್ನು ಬಳಸಿ ಸರಳವಾದ ರೀತಿಯಲ್ಲಿ ನಮ್ಮ ದೇವಸ್ಥಾನ ಸ್ಟೈಲ್  ನಲ್ಲಿ ತಿಳಿಸಾರು ಪಾಕವಿಧಾನ ಬಿಸಿ ಅನ್ನದ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

ಸಾಂಬಾರ್ ಮಸಾಲಾಕ್ಕೆ ಬೇಕಾಗಿರುವ ಸಾಮಾಗ್ರಿ

  • ಒಣಮೆಣಸು 6 ರಿಂದ 8 (ಖಾರಕ್ಕೆ ತಕ್ಕಷ್ಟು )
  •  ಕೊತ್ತಂಬರಿ2ಚಮಚ
  • ಝೀರ1/2ಚಮಚ
  • ಕರ್ರಿಬೇವು 
  • ಕಾಳುಮೆಣಸು1/4ಚಮಚ
  • ಸಾಸಿವೆ1/4ಚಮಚ
  • ಮೆಂತೆ1/4ಚಮಚ
  • ಕಡಲೆ ಬೇಳೆ1ಚಮಚ
ಇವನ್ನು ಹುರಿದಿಟ್ಟು ಹುಡಿ ಮಾಡಿಕೊಳ್ಳಿ.

  ಟೂರ್ ದಾಲ್ ಬೇಯಲು ಬೇಕಾಗಿರುವ ಸಾಮಾಗ್ರಿ :

  • ಟೂರ್ ದಾಲ್ 1ಕಪ್ 
  •  ಹಲದಿ 1/2ಚಮಚ 
  • ಉಪ್ಪು ರುಚಿಗೆ ತಕ್ಕಷ್ಟು
  • ನೀರು ಬೇಯಲು ಬೇಕಾಗುಷ್ಟು
1ಕಪ್ ಟೂರ್ ದಾಲ್ ಅನ್ನು ತೊಳೆದು ಟೂರ್ ದಾಲ್  ಹಲದಿ,ಉಪ್ಪು ನೀರು ಹಾಕಿ ಚೆನ್ನಾಗಿ ಬೇಯಲು ಇಡಿ.

ಹದಗೊಳಿಸುವಿಕೆಗಾಗಿ 

  • ಸಾಸಿವೆ ಕಾಳು1/2ಚಮಚ
  • ಎಣ್ಣೆ 1ಚಮಚ
  • ಹಿಂಗು ಚಿಟಿಕೆಯಷ್ಟು
  • ಒಣಮೆಣಸು 2
  • ಕರ್ರಿಬೇವು 
ಒಂದು ಸೌಟುಗೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಕಾಳು, ಹಿಂಗು,ಒಣಮೆಣಸು, ಕರ್ರಿಬೇವು ಹಾಕಿ ಒಗ್ಗರಣೆ ಕೊಡಿ.

ಬಾಕಿ ಸಮಾಗ್ರಿ:

  • ಹುಣಸೆ ರಸ 1ಸಣ್ಣ ಕಪ್ 
  • ತೆಂಗಿನಕಾಯಿ ಹಾಲು 1 ಸಣ್ಣ ಕಪ್
  • ಕೊತ್ತಂಬರಿ ಸೊಪ್ಪು 

ಮಾಡುವ ವಿಧಾನ :

  1.  ಬೇಯಿಸಿದ ಬೇಳೆಗೆ ಬೇಕಾಗುವಷ್ಟು ನೀರು ಸೇರಿಸಿ, ಹುಡಿ ಮಾಡಿದ ಸಾಂಬಾರ ಪೌಡರ,ಹುಣಸೆರಸ,ತೆಂಗಿನಕಾಯಿ ಹಾಲು,ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ 10 ನಿಮಿಷಗಳ ಕಾಲ ಕುದಿಸಿದ ನಂತರ ಕೊತ್ತಂಬರಿ ಎಲೆಗಳನ್ನು ಸಾರಿಗೆ  ಹಾಕಿ.
  2. ನಂತರ ಹದಗೊಳಿಸಿದರೆ ಬಿಸಿ ಬಿಸಿ ಅನ್ನದ ಜೊತೆ ತಿಳಿಸಾರು ಬಡಿಸಿ.
  3. ಜನ : 8 ಜನರಿಗೆ ಬೇಕಾಗುವಷ್ಟು
  4. ಸಮಯ : 20 ನಿಮಿಷ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.