mangalore southekayi curry |ಸೌತೆಕಾಯಿ ಕೊದ್ದೆಲ್ ರೆಸಿಪಿ ಕನ್ನಡದಲ್ಲಿ

ಕರ್ನಾಟಕದಲ್ಲಿ ಲಭ್ಯವಿರುವ ವಿಶೇಷ ಸೌತೆ ಕಾಯಿ ಕೊದ್ದೆಲ್ ರೆಸಿಪಿ (ಸೌತೆಕಾಯಿ ಸಾಂಬಾರ್) ತಯಾರಿಸಲಾದ ಅತ್ಯಂತ ಸಾಂಪ್ರದಾಯಿಕವಾದ mangalore southekayi curry ಪಾಕವಿಧಾನ. ಈ ಸೌತೆಕಾಯಿ ಸಾಂಬಾರ್ ಶ್ರೀಮಂತ ರುಚಿಕರವಾಗಿದೆ.

ಸೌತೆಕಾಯಿ ಸಾಂಬರ್ (ಕೊದ್ದೆಲ್) ಪಾಕವಿಧಾನ ಕನ್ನಡ ದಲ್ಲಿ 

  • ಇದು ಹಳದಿ ಬಣ್ಣದಲ್ಲಿದ್ದು ಮಂಗಳೂರು ಕಡೆಯ ಕರಾವಳಿಗಳಲ್ಲಿ ಹೆಚ್ಚಾಗಿ ಸಾಂಬರ್ ಮಸಾಲವನ್ನು ಹರೆದು ತೆಂಗಿನಕಾಯಿ ಯೊಟ್ಟಿಗೆ ಬಳಸಿ ಇದರ ರುಚಿಯನ್ನು ಹೆಚ್ಚಿಸುತ್ತಾರೆ.
  • ಇದು ಉದ್ದಕ್ಕೆ ಕಟ್ ಮಾಡಿ ತಿರುಳನ್ನು ತೆಗೆದು1ಇಂಚೆನಷ್ಟುತುಂಡುಗಳನ್ನು ಮಾಡಿ ಸಿಹಿ ಹುಳಿ ಸೌತೆಕಾಯಿ ಕೊದ್ದೆಲ್ ಅನ್ನು  ಮದುವೆ ಸಭಾರಂಭಗಳಲ್ಲಿ ಅಲ್ಲದೆ ಮನೆಯಲ್ಲಿ ಹಬ್ಬ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ.
  • Mangalore southe kayi curry in hindi

  • ಸೌತೆಕಾಯಿ ಕೊದ್ದೆಲ್ ಇದು ಕರ್ನಾಟಕ ದಲ್ಲಿ ಲಭ್ಯವಿರುವ ವಿಶೇಷ ಸೌತೆಕಾಯಿ ಕೊದ್ದೆಲ್ ಅತ್ಯಂತ ಸಂಪ್ರದಾಯಕ ರೆಸಿಪಿಯಾಗಿದೆ.
  • ಬೇಕಾಗಿರುವ ಸಾಮಾಗ್ರಿ 
  • ಸೌತೆಕಾಯಿ ಹದಗಾತ್ರದ 1
  • ಬ್ಯಾಡಗಿ ಮೆಣಸು 5ರಿಂದ 6 ಖಾರಕ್ಕೆ ತಕ್ಕಷ್ಟುಗುಂಟೂರ್ ಮೆಣಸು 1ರಿಂದ 2
  • ತೆಂಗಿನಕಾಯಿ ತುರಿ 
  • ಕೊತ್ತಂಬರಿ ಬೀಜ 2ಚಮಚ
  • ಜೀರಾ 1ಚಮಚ
  • ಉದ್ದಿನಬೇಳೆ ಬೇಳೆ 1/2ಚಮಚ
  • ಕಡ್ಲೆ ಬೇಳೆ 1/4ಚಮಚ
  • ಮೆಂತೆ 1/4ಚಮಚ
  • ಹುಣಸೆ ರಸ 1ಕಪ್
  • ಅರಸಿನ 1/4ಚಮಚ
  • ಬೆಲ್ಲ ರುಚಿಗೆ ತಕ್ಕಷ್ಟು
  •  ಉಪ್ಪು ರುಚಿಗೆ ತಕ್ಕಷ್ಟು
  • ಕರಿಬೇವು 8ಎಲೆ

ಒಗ್ಗರಣೆಗೆ ಬೇಕಾಗಿರುವ ಸಾಮಾಗ್ರಿ :

  •  ಎಣ್ಣೆ1ಚಮಚ
  • ಬ್ಯಾಡಗಿ ಮಿರ್ಚಿ 1
  • ಸಾಸಿವೆ 1/2 ಚಮಚ
  • ಉದ್ದಿನ ಬೇಳೆ
  • 1/2ಚಮಚಕರಿಬೇವು ಕೆಲವು ಎಲೆಗಳು
  • ಮಾಡುವ ವಿಧಾನ
  1. ಸಾಂಬಾರ್-ಸೌತೆಕಾಯಿಯನ್ನು ತೊಳೆದು ಮಧ್ಯದಿಂದ ಮೃದುವಾದ ಭಾಗವನ್ನು ತೆಗೆದುಕೊಂಡು ಅದನ್ನು ತುಂಡುಗಳಾಗಿ ಕತ್ತರಿಸಿ.
  2. ಈಗ ಅದೇ ಪಾತ್ರೆಯಲ್ಲಿ ಹುಣಸೆ ಹಣ್ಣಿನ ರಸ, ಅರಿಶಿನ, ಕತ್ತರಿಸಿದ ಸಾಂಬಾರ್-ಸೌತೆಕಾಯಿ, 1 ಟೀಸ್ಪೂನ್ ಉಪ್ಪು, 1.5 ಕಪ್ ನೀರು ಬೇಯಿಸಿ.
  3. ಫ್ರೈಯಿಂಗ್ ಫ್ಯಾನ್ ತೆಗೆದುಕೊಂಡು
  4. ಒಣ ಮೆಣಸು ಉದ್ದಿನಬೇಳೆ, ಚೆನ್ನಾ ದಾಲ್, ಕೊತ್ತಂಬರಿ ಬೀಜಗಳು, ಜೀರಿಗೆ, ಮೆಂತ್ಯ ಬೀಜಗಳು, ಕರಿಬೇವು ಮತ್ತು ಇಂಗು ಜೊತೆಗೆ ತೆಂಗಿನ ತುರಿಯನ್ನು ಮಧ್ಯಮ ಉರಿಯಲ್ಲಿ ಒಂದು ಚಮಚ ಎಣ್ಣೆಯನ್ನು ಬಳಸಿ ಹುರಿದುಕೊಳ್ಳಿ.
  5. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಹುರಿದ ಮಸಾಲೆಯನ್ನು ಮಿಕ್ಸರ್ ಜಾರ್ ನಲ್ಲಿ ರುಬ್ಬಿಕೊಳ್ಳಿ.
  6. ಬೇಯಿಸಿದ ತರಕಾರಿಗೆ ರುಬ್ಬಿದ ಪೇಸ್ಟ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಚಮಚ ಬೆಲ್ಲ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿ ಬರುವವರೆಗೆ ಬೇಯಿಸಿ.
  7. ಬೇಯಿಸಿದ ತರಕಾರಿಗಳಿಗೆ ತಡ್ಕಾ ನೀಡಿ.ಮೇಲಿಂದ ಕೊಟ್ಮಿರಿಯಿಂದ ಅಲಂಕರಿಸಿ.
  8. ಈಗ ತೌತೆ ಕೊದ್ದೆಲ್ ಅನ್ನು ಅನ್ನದೊಂದಿಗೆ ಬಡಿಸಿ.
  9. ಜನ :5ರಿಂದ 6
  10. ಸಮಯ :15ರಿಂದ 20

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.