tomato Saaru |-ಟೊಮ್ಯಾಟೋ ಸಾರು |udupi style tomato rasm|

ತುಂಬಾನೇ ಸುಲಭ ಮತ್ತು ಸರಳ ರೀತಿಯಲ್ಲಿ ಮನೆಯಲ್ಲಿಯೇ ತಯಾರು ಮಾಡುವ udupi style tomato saaru ಅನ್ನದ ಜೊತೆ ಸವಿಯಲು ತುಂಬಾ ಸೊಗಸಾಗಿ ಇರುತ್ತದೆ.


tomatosaaru



ಟೊಮೇಟೊ ಸಾರು ರೆಸಿಪಿ

  • Udupi style tomato saaru ಅನ್ನು ಅತ್ಯಂತ ಸುಲಭವಾಗಿ ಮತ್ತು ತ್ವರಿತವಾಗಿ ಮಾಡುವುದು ಹೇಗೆ ಎಂದು ತಿಳಿಯೋಣ.
  • ಟೊಮೇಟೊ ಹುಳಿ ಮಿಶ್ರೀತ tomato saaru ಅನ್ನದ ಜೊತೆ ಒಂದು ಪಲ್ಯ ಇದ್ದರೆ ಅಂತೂ ಊಟ ಎಂಥ ರುಚಿ ಅಂತೀರಾ.
  • ಇದನ್ನು ಮಾಡುವ ರೀತಿ ಅನೇಕವಿದೆ, ಇಲ್ಲಿ ನಮ್ಮ ಕಮ್ಮಿ ಸಮಯದಲ್ಲಿ ಹೇಗೆ ಮಾಡುವುದು ಎಂದು ತಿಳಿ ಯೋಣ.ಆಗಾದ್ರೆ ಬನ್ನಿ,ಇದಕ್ಕೆ ಬೇಕಾಗಿರುವ ಸಾಮಾಗ್ರಿ ಏನು ಎಂದು ತಿಳಿಯೋಣ.

ಬೇಕಾಗಿರುವ ಸಾಮಗ್ರಿಗಳು

  • ಟೊಮ್ಯಾಟೋ 5
  • ಹಸಿರು ಮೆಣಸು 5 ಕಾರಕ್ಕೆ ತಕ್ಕಷ್ಟು
  • ಬೆಳ್ಳೂಳಿ 4ಎಸಳು ,
  • ಹೀರುಳ್ಳಿ ಅರ್ಧ
  • ಸಾಸಿವೆ 1ಚಮಚ
  • ಝೀರಿಗೆ ಅರ್ಧಚಮಚ
  • ಕಾಳು ಮೆಣಸು 4ರಿಂದ 5
  • ಬ್ಯಾಡಗಿ ಮೆಣಸು 2
  • ಶುಂಠಿ ಅರ್ಧ ತುಂಡು
  • ಹಿಂಗು ಚುಟಕಿ 
  • ಅರಸಿನ ಅರ್ಧಚಮಚ
  • ಮೆಣಸಿನ ಹುಡಿ ಕಾರಕ್ಕೆ ತಕ್ಕಷ್ಟು
  • ಕೊತಂಬರಿ ಸೊಪ್ಪು
  •  ಕರಿಬೇವು 1ಎಸಳು
  • ಒಗ್ಗರಣೆಗೆ ಎಣ್ಣೆ
  • ರುಚಿಗೆ ತಕ್ಕಷ್ಟು ಉಪ್ಪು
  • ಬೇಕಾದಷ್ಟು ನೀರು

ಮಾಡುವ ವಿಧಾನ :

  1. ಮೊತ್ತ ಮೊದಲು ಟೊಮ್ಯಾಟೋವನ್ನು ಸಣ್ಣಗೆ ಕಟ್ ಮಾಡಿ ಇಟ್ಕೊಳಿ, ಅಗೇನೇ ಹೀರುಳ್ಳಿ. ಶುಂಠಿ, ಹಸಿರು ಮೆಣಸು ಕಟ್ ಮಾಡಿ ಮತ್ತು ಬೆಳ್ಳೊಳ್ಳಿ ಜಜ್ಜಿ ಇಟ್ಕೊಳಿ.
  2. ಗ್ಯಾಸ ಹೊತ್ತಿಸಿ ಒಗ್ಗರಣೆಗೆ ಬಾಣಲೆ ಇಡಿ.
  3. ಬಾಣಲೆ ಬಿಸಿ ಆದ ಮೇಲೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಝೀರಿಗೆ, ಕಾಳು ಮೆಣಸು,ಬ್ಯಾಡಗಿ ಮೆಣಸು,ಹಿಂಗು ಹಾಕಿ.ಸಾಸಿವೆ ಸಿಡಿದ ಕೂಡಲೇ ಬೆಳ್ಳೂಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಹೀರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಮಗುಚಿ,
  4. ಈಗ ಕರಿಬೇವು,ಹಸಿರು ಮೆಣಸು,ಅರಸಿನ,ಶುಂಠಿ, ಸ್ವಲ್ಪ ಉಪ್ಪು ಹಾಕಿ ಇನ್ನೊಮ್ಮೆ ಮಗುಚಿ,ಹೀರುಳ್ಳಿ ಕೆಂಪು ಬಣ್ಣಕೆ ತಿರುಗಿದಾಗ ಸಣ್ಣಗೆ ಕಟ್ ಮಾಡಿದ ಟೊಮ್ಯಾಟೋ ಹಾಕಿ. ಒಗ್ಗರಣೆಯಲ್ಲಿ ಟೊಮ್ಯಾಟೋ ಚೆನ್ನಾಗಿ ಬೇಯುವ ತನಕ ನಡು ನಡುವೆ ಸೌಟು ಹಾಕುತ್ತಾ ಇರಿ.
  5. . ಚೆನ್ನಾಗಿ ಬೆಂದ ನಂತರ ನೀರು ಹಾಕಿ,(ನೀರು ಎಷ್ಟು ಬೇಕು ಅಷ್ಟೇ ನೋಡಿಕೊಂಡು ಹಾಕಿ. )ಈ ಹೊತ್ತಿಗೆ ಉಪ್ಪು,ಕಾರ ನೋಡಿ,ಕಾರಕ್ಕೆ ಬೇಕಾದರೆ ಮೆಣಸು ಹುಡಿ ಹಾಕಿ.ಚೆನ್ನಾಗಿ ಕುದಿಯಲು ಬಿಡಿ. ಒಂದು ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಸೊಗಸಾದ ಟೊಮ್ಯಾಟೋ ಸಾರು ಅನ್ನದ ಜೊತೆ ಸವಿಯಲು ತಯಾರು ಆಗಿದೆ.
  6. ಜನ :6 ಜನರಿಗೆ ಬೇಕಾಗುವಷ್ಟು
  7. ಸಮಯ :10 ನಿಮಿಷ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.