Idli recipe |ಇಡ್ಲಿ ರೆಸಿಪಿ |idli recipe in kannada|How to make soft idli|

 
ಇದು ತುಂಬಾನೇ ಸರಳ ಮತ್ತು ಸುಲಭ idlirecipe ಯಾಗಿದ್ದು ಬೆಳಗ್ಗಿನ ಉಪಹಾರಕ್ಕೆ ತ್ವರಿತವಾಗಿ ಮನೆಯಲ್ಲಿಯೇ ತಯಾರಿಸುವಂತ ದಕ್ಷಿಣ ಭಾರತದ ಜನಪ್ರಿಯ ಖಾದ್ಯ ವಾಗಿದ್ದು ಸಾಂಬಾರ್ ಮತ್ತು ಚಟ್ನಿ ಜೊತೆಗೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.

How to make soft idli

  • ದಕ್ಷಿಣ ಭಾರತದ ಜನಪ್ರಿಯ ಖಾದ್ಯ ವಾಗಿದ್ದು ಎಲ್ಲರೂ ಇಷ್ಟ ಪಡುವಂತಹದ್ದು ಇಡ್ಲಿಯ ಜೊತೆಗೆ ಸಾಂಬಾರ್ ಚಟ್ನಿಯಂತೂ ತುಂಬಾನೇ ರುಚಿಯಾಗಿರುತ್ತದೆ.
  • ಮನೆಯಲ್ಲಿಯೇ ತುಂಬಾ ಕಮ್ಮಿಸಾಮಾಗ್ರಿಗಳನ್ನು ಬಳಸಿ ಇಡ್ಲಿಯನ್ನು ತುಂಬಾ ಸುಲಭವಾಗಿ ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ:

  • ಅರೆಬೊಳಂತೆ2ಲೋಟೆ(ಇಡ್ಲಿ ಅಕ್ಕಿ)
  • ಉದ್ದು2ದೊಡ್ಡಚಮಚ
  • ಬೇಯಿಸಿದ ಅನ್ನ1ಕಪ
  • ಉಪ್ಪುರುಚಿಗೆತಕ್ಕಷ್ಟು
  • ಅಡುಗೆ ಸೋಡಾಅರ್ಧಚಮಚ

ಮಾಡುವ ವಿಧಾನ:

  1. ಅಕ್ಕಿ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು 6 ಗಂಟೆಗಳ ಕಾಲ ನೆನೆಹಾಕಿ.ಮಿಕ್ಸಿಜಾರ್ ನಲ್ಲಿ ಅಕ್ಕಿ ಮತ್ತು ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ  ಸ್ವಲ್ಪ ಸ್ವಲ್ಪನೇ ನೀರು ಹಾಕಿ ನೈಸ್ ಮಾಡಿ ಗ್ರೈಂಡ ಮಾಡಿ.
  2. ನಂತರ 1ಕಪನಷ್ಟು ಅನ್ನಹಾಕಿ ಗ್ರೈಂಡ ಮಾಡಿ ಒಂದು ಪಾತ್ರೆಗೆ ಟ್ರಾನ್ಸಫರ ಮಾಡಿ.ಅದಕ್ಕೆ ಉಪ್ಪು,ನೀರಿನಲ್ಲಿ ಕಲಸಿಟ್ಟ ಸಕ್ಕರೆ, ಈಸ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 8ಗಂಟೆ ಮಡಗಿರಿ.ಬೆಳಿಗ್ಗೆ ಇಡ್ಲಿ ಮಾಡಿ.

ಚಟ್ನಿಗೆ ಬೇಕಾಗುವ ಸಾಮಾಗ್ರಿ :

  • ಚಟ್ನಿಗೆ ಕೊತ್ತಂಬರಿ ಸೊಪ್ಪು,ಸುಂಟಿ, ಕಾಯಿಮೆಣಸು ಕಾರಕ್ಕೆ ತಕ್ಕಷ್ಟು, ತೆಂಗಿನಕಾಯಿತುರಿ,ಒಂದು ಚೂರು ಹುಳಿ,ಉಪ್ಪು ಸ್ವಲ್ಪ ನೀರು ಹಾಕಿ ಗ್ರೈಂಡ ಮಾಡಿ.
  • ಗ್ರೈಂಡ ಮಾಡಿದ ಚಟ್ನಿಯನ್ನು ಬೇರೆ ಪಾತ್ರೆಗೆ ತೆಗೆಯಿರಿ.ಇಡ್ಲಿ ಜೊತೆಗೆ ಸವಿಯಲು ಈಗ ಚಟ್ನಿ ಸಿದ್ದವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.