Heerekayi sippeya Chutney-ಹಿರೇಕಾಯಿ ಸಿಪ್ಪೆಯ ಚಟ್ನಿ -How to make Ridge gourd chutney

ಇದು ಒಂದು ಸರಳ ಮತ್ತು ಸುಲಭವಾಗಿ,Heerekayi sippeya Chutney-  ಇದು ಸಾಂಪ್ರದಾಯಿಕ ಅಡುಗೆಯಾಗಿದ್ದು ಮತ್ತು ಆರೋಗ್ಯಕರ ರೆಸಿಪಿಯಾಗಿದೆ.




Heerekayi sippeya Chutneyಹಿರೇಕಾಯಿ ಸಿಪ್ಪೆಯ ಚಟ್ನಿ

  • ಆಹಾರ ತಯಾರಿಕೆಯಲ್ಲಿ ಬಳಸುವ ಹಲವಾರು ತರಕಾರಿಗಳ ಪ್ರಯೋಜನಗಳು ನಮಗೆ ಕೆಲವೊಮ್ಮೆ ತಿಳಿದಿರುವುದಿಲ್ಲಇದು ನಮ್ಮಅರೋಗ್ಯವನ್ನುಕಾಪಾಡುವ ಕೆಲಸವನ್ನುಮಾಡುತ್ತದೆ.
  • ಕಣ್ಣಿನ ದೃಷ್ಟಿಯನ್ನು ಅರೋಗ್ಯವಾಗಿಡುತ್ತೆ,ಮೂಲ್ಯವಾಧಿ ನಿವಾರಣೆ ಮತ್ತು ದೇಹದ ಆಯಾಸವನ್ನು ಕಮ್ಮಿ ಮಾಡುತ್ತೆ.ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು ಕೂಡ ಇತರ ತರಕಾರಿಗಳಿಗೆ ಸರಿಸಾಟಿಯಾಗಿ ನಮ್ಮ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಪಡೆದಿವೆ. ಹೀಗೆ ಅನೇಕ ಪ್ರಯೋಜನಗಳು. ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ.
  • ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು.ಇದರಲ್ಲಿ ರುಚಿಯಾದ ಚಟ್ನಿ ತಯಾರಿಸಬಹುದು.


  • ಆದರೆ ಒಬ್ಬೊಬ್ರು ತಯಾರಿಸುವ ರೀತಿ ಒಂದೊದು.ಹಿರೇಕಾಯಿಯ ಮೇಲಿನ ಭಾಗ ಮುಳ್ಳಿನಾಗೆ ಇರುತ್ತದೆ.ಅದರ ಮೇಲಿನ ಸಿಪ್ಪೆಯನ್ನು ಸ್ವಲ್ಪ ದಪ್ಪವಾಗಿ ಕಟ್ಮಾಡಿಕೊಂಡು ಅದರಲ್ಲಿ ಒಂದು ಸ್ವಾದಿಷ್ಟವಾದ ಚಟ್ನಿ ತಯಾರಿಸೋಣ.

ಬೇಕಾಗುವ ಸಾಮಾಗ್ರಿ

  • ಹೀರೆಕಾಯಿ ಸಿಪ್ಪೆ 1ಸಣ್ಣ ಕಪ್ 
  • ತೆಂಗಿನಕಾಯಿ ತುರಿಸಣ್ಣ ಕಪ್
  • ಬ್ಯಾಡಗಿ ಮೆಣಸು 1
  • ಕಾಯಿಮೆಣಸು ಕಾರಕ್ಕೆ ತಕ್ಕಷ್ಟು
  • ಜೀರ ಕಾಲು ಚಮಚ,
  • ಕೊತ್ತಂಬರಿ ಕಾಲುಚಮಚ,
  • ನೀರುಳ್ಳಿ ಸಣ್ಣ ತುಂಡು 
  • ಬೆಳ್ಳೂಳಿ 1ಎಸಳು 
  • ಸಣ್ಣ ತುಂಡು ಸುಂಟಿ
  • ಹುಣಸೆಹುಳಿ ಒಂದು ಚೂರು
  • ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

  1. ಹಿರೇಕಾಯಿಯ ಸಿಪ್ಪೆಯನ್ನು ತೊಳೆದು ಸ್ವಲ್ಪನೀರು ಹಾಕಿ ಬೇಯಿಸಿಡಿ.
  2. ನಂತರಕೊತ್ತಂಬರಿ,ಝೀರ ಹುರಿದುಕೊಂಡು ಆದಕ್ಕೆ ತೆಂಗಿನಕಾಯಿತುರಿ,ಹುಣಸೆ8 ಹಣ್ಣು,ನೀರುಳ್ಳಿ,ಬೆಳ್ಳೂಳಿ, ಸಣ್ಣ ತುಂಡು ಸುಂಟಿ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ ಚಟ್ನಿ ತಯಾರಿಸಿ.
  3. ಈಗ ರುಚಿಯಾದ ಅರೋಗ್ಯಕರವಾದ ಚಟ್ನಿ ಅನ್ನದ ಜೊತೆ ಸವಿಯಲು ಸಿದ್ದವಾಗಿದೆ.
ಸಮಯ :10 ನಿಮಿಷನಾಲ್ಕು ಜನರಿಗೆ ಬೇಕಾ ಗುವಷ್ಟು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.