hagalakayi gojju। bitter ground gojju|ಹಾಗಲಕಾಯಿ ಗೊಜ್ಜು ಕರ್ನಾಟಕ ಸ್ಟೈಲ್.

 
 ಇದು ಸರಳ ಮತ್ತು ಸುಲಭವಾಗಿ ಮನೆಯಲ್ಲಿ ತಯಾರಿಸುವ   hagalakayi gojju    ಕರ್ನಾಟಕ  ಶೈಲಿಯಲ್ಲಿ  ಆರೋಗ್ಯಕಾರಿ ರೆಸಿಪಿಯಾಗಿದೆ.
hagalakayi gojju
ಹಾಗಲಕಾಯಿ ಗೊಜ್ಜು Karela gojju रेसिपी
  • ತರಕಾರಿಗಳಲ್ಲಿ ಆಕರ್ಷಕವಾಗಿರುವ ಹಾಗಲಕಾಯಿ ರುಚಿಯಲ್ಲಿ ಕಹಿ ಕಂಡರೂ ಅದರ ಪ್ರಯೋಜನಗಳು ಖಂಡಿತ ಸಿಹಿವಾಗಿವೆ .ಹಾಗಲಕಾಯಿಯ ಈ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?
  • ಹಾಗಲಕಾಯಿ ಎಷ್ಟು ಕಹಿ ಅಷ್ಟೇ ಅರೋಗ್ಯಕಾರಿಯೂ ಹೌದು. ಅಂತ ದಿನ ನಿತ್ಯದ ಪದಾರ್ಥದಲ್ಲಿ ಬಳಕೆ ಮಾಡುವವರು ತುಂಬಾ ಕಮ್ಮಿ. ವಾರಕ್ಕೆ ಒಂದು ಸಲ ಖಂಡಿತವಾಗಿಯೂ ತಿನ್ನಬೇಕು.ಇದು ಸಿಹಿ ಹುಳಿ ಉಪ್ಪು ಮಿಶ್ರೀತ ಗೊಜ್ಜು ತಿನ್ನಲು ತುಂಬಾ ರುಚಿ.
  • ಮತ್ತು ತ್ವರಿತವಾಗಿ ಮಾಡುವ ಗೊಜ್ಜು ನೀವು ಖಂಡಿತ ಇಷ್ಟ ಪಟ್ಟು ತಿಂತೀರಾ. ಶೀಘ್ರದಲ್ಲಿ ಹಾಗಲಕಾಯಿ ಗೊಜ್ಜನ್ನು ಹೇಗೆ ಮಾಡುವುದು ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ:

  • ಹಾಗಲಕಾಯಿ 1
  • ಹುಣಸೆಹಣ್ಣುಲಿಂಬೆ ಹಣ್ಣಿನ ಗಾತ್ರ ದಷ್ಟು
  • ಅರಶಿನ ಅರ್ಧ ಚಮಚ
  • ಉಪ್ಪು ರುಚಿಗೆ ತಕ್ಕಷ್ಟು
  • ಅಚ್ಚ ಕಾರದ ಹುಡಿ ಕಾರಕ್ಕೆ ತಕ್ಕಷ್ಟು
  • ಸಾಂಬಾರ್ ಪೌಡರ್ 2ಚಮಚ
  • ಟೊಮೇಟೊ 1ಸಣ್ಣದು
  • ಸುಂಟಿ ಅರ್ಧ ತುಂಡು
  • ಮೆಣಸಿನ ಕಾಯಿ1
  • ಹೀರುಳ್ಳಿ 1ಸಣ್ಣಗೆ ಕಟ್ ಮಾಡಿದ,
  • ಬೆಳ್ಳೋಳಿ 5ಎಸಳು ಸಣ್ಣ ಕೊಚ್ಚಿದ
  • ಸಾಸಿವೆ
  • ಬೆಲ್ಲ ಸಿಹಿಗೆ ತಕ್ಕಷ್ಟು

ಮಾಡುವ ವಿಧಾನ:

  1. ಮೊದಲು ಹಾಗಲ ಕಾಯಿಯನ್ನು ಸಣ್ಣಗೆ ಕೊಚ್ಚಿ ಉಪ್ಪಿನಲ್ಲಿ ಹಾಕಿಡಿ,10 ರಿಂದ 15 ನಿಮಿಷಗಳ ಕಾಲ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಹಿಂಡಿ ಇಟ್ಕೊಳಿ.
  2. ಒಂದು ಬಾಣಲೆಗೆ ಬೇಯಲು ಎಷ್ಟು ಬೇಕೋ ಅಷ್ಟೇ ಹುಣಸೆ ರಸ ಹಾಕಿ.ಅದಕ್ಕೆ ಅರಸಿನ ಉಪ್ಪು ರುಚಿಗೆ ತಕ್ಕಷ್ಟು, ಅಚ್ಚಕಾರದ ಹುಡಿ ಕಾರಕ್ಕೆ ತಕ್ಕಷ್ಟು, ಸಾಂಬಾರ್ ಹುಡಿ,ಶುಂಠಿ,ಕಾಯಿಮೆಣಸು ಟೊಮೇಟೊ ಸಣ್ಣ ಕಟ್ಮಾಡಿದ ಹೀರುಳ್ಳಿ ಬೆಳ್ಳೋಳಿ ,ಬೆಲ್ಲ, ನೀರಿನಿಂದ ಹಿಂಡಿ ತೆಗೆದ ಹಾಗಲಕಾಯಿಯನ್ನು ಹುಣಸೆ ರಸಕ್ಕೆ ಹಾಕಿ.
  3.  ನೀರು ಆರುವ ತನಕ ಚೆನ್ನಾಗಿ ಬೇಯಿಸಿ.ನಡು ನಡುವೆ ಮಗುಚಿ ತಳ ಹತ್ತದಾಗೆ ನೋಡಿಕೊಳ್ಳಿ.ಸಿಹಿ ಉಪ್ಪು ನೋಡಿ ಹಾಕಿಕೊಳ್ಳಿ.ಬೆಳ್ಳೂಳಿ ಸಾಸಿವೆ ಒಗ್ಗರಣೆ ಕೊಡಿ.ಈಗ ಹಾಗಲಕಾಯಿ ಗೊಜ್ಜು ಅನ್ನದ ಜೊತೆ ಸವಿಯಲು ರೆಡಿಯಾಗಿದೆ.
  4. ಟೈಮ್ :10ನಿಮಿಷ ನಾಲ್ಕು ಜನಕ್ಕೆ ಬೇಕಾಗುವಷ್ಟು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.